ನಟಿ ಮೇಘನಾ ರಾಜ್ ಗೆ ಅಕ್ಟೋಬರ್ ತಿಂಗಳು ತುಂಬಾ ವಿಶೇಷ: ಯಾಕೆ ಗೊತ್ತಾ..?

ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿರುವ ನಟಿ ಮೇಘನಾ ರಾಜ್ ಅಕ್ಟೋಬರ್ ತಿಂಗಳ ವಿಶೇಷತೆ ಬಗ್ಗೆ ತಿಳಿಸಿದ್ದಾರೆ.   

Written by - Puttaraj K Alur | Last Updated : Oct 2, 2021, 10:59 AM IST
  • ಅಕ್ಟೋಬರ್ ತಿಂಗಳ ವಿಶೇಷತೆ ಬಗ್ಗೆ ತಿಳಿಸಿದ ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್
  • ಒಂದೇ ತಿಂಗಳಿನಲ್ಲಿ ಚಿರಂಜಿವಿ ಸರ್ಜಾ ಮತ್ತು ರಾಯನ್ ರಾಯ್ ಸರ್ಜಾ ಹುಟ್ಟುಹಬ್ಬ
  • ಅ.17 & ಅ.22 ಕೇವಲ ಐದೇ ದಿನಗಳಲ್ಲಿ ಅಪ್ಪ-ಮಗನ ಜನ್ಮದಿನ
ನಟಿ ಮೇಘನಾ ರಾಜ್ ಗೆ ಅಕ್ಟೋಬರ್ ತಿಂಗಳು ತುಂಬಾ ವಿಶೇಷ: ಯಾಕೆ ಗೊತ್ತಾ..?  title=
ಮೇಘನಾ ರಾಜ್ ಅಕ್ಟೋಬರ್ ತಿಂಗಳ ವಿಶೇಷ (Photo Courtesy: @Zee News)

ಬೆಂಗಳೂರು: ಪತಿ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡ ಬಳಿಕ ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್(Sandalwood Actress Meghana Raj) ತುಂಬಾ ದುಃಖದಲ್ಲಿದ್ದರು. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಬಾಳಲ್ಲಿ ವಿಧಿ ಆಟವಾಡಿತ್ತು. ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ನಟನೆಯಿಂದ ಮನೆಮಾತಾಗಿದ್ದ ಚಿರು ಸರ್ಜಾ 40ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಅವರ ನನಪಿನಲ್ಲಿಯೇ ನಟಿ ಮೇಘನಾ ರಾಜ್ ತೀವ್ರ ನೋವು ಅನುಭವಿಸಿದ್ದರು.  

ಪುತ್ರ ರಾಯನ್ ರಾಜ್ ಸರ್ಜಾ(Rayan Raj Sarja) ಹುಟ್ಟಿದ ನಂತರ ಮೇಘನಾರ ಮೊಗದಲ್ಲಿ ಮಂದಹಾಸ ಮೂಡಿತ್ತು. ರಾಯನ್ ಆಗಮನದ ಬಳಿಕ ಮೇಘನಾ ಮತ್ತು ಸರ್ಜಾ ಕುಟುಂಬದಲ್ಲಿ ಸಂತಸ ಮನೆಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವ ಮೇಘನಾ ರಾಜ್ ಅಭಿಮಾನಿಗಳಿಗೆ ನಿರಂತರವಾಗಿ ಅಪ್ಡೇಟ್ ನೀಡುತ್ತಿರುತ್ತಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿರುವ ನಟಿ ಅಕ್ಟೋಬರ್ ತಿಂಗಳ ವಿಶೇಷತೆ ಬಗ್ಗೆ ತಿಳಿಸಿದ್ದಾರೆ.   

ಇದನ್ನೂ ಓದಿ: Amitabh Bachchan: ಗಾಯದ ನಡುವೆಯೂ KBC ಶೋ ನಲ್ಲಿ ಭಾಗವಹಿಸಿದ ಅಮಿತಾಬ್ ಬಚ್ಚನ್

ಹೌದು, ಮೇಘನಾ(Meghana Raj)ರಿಗೆ ಅಕ್ಟೋಬರ್ ತಿಂಗಳು ತುಂಬಾ ವಿಶೇಷ. ಇದಕ್ಕೆ ವಿಶೇಷ ಕಾರಣವೂ ಇದೆ. ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾ ಹಾಗೂ ಪುತ್ರ ರಾಯನ್ ರಾಜ್ ಸರ್ಜಾ ಇಬ್ಬರೂ ಹುಟ್ಟಿದ್ದು ಒಂದೇ ತಿಂಗಳಿನಲ್ಲಿ. ಅಂದರೆ ಅಕ್ಟೋಬರ್ ತಿಂಗಳಿನಲ್ಲಿ. ಕೇವಲ 5 ದಿನಗಳ ಅಂತರದಲ್ಲಿ ಅಪ್ಪ-ಮಗನ ಜನ್ಮದಿನ ಬರಲಿದೆ. ಅ.17 ಚಿರು ಹುಟ್ಟುಹಬ್ಬವಾದರೆ, ಅ.22 ರಾಯನ್ ಜನ್ಮದಿನವಾಗಿದೆ. ಹೀಗಾಗಿ ಅಕ್ಟೋಬರ್ ತಿಂಗಳು ಮೇಘನಾರಿಗೆ ತುಂಬಾ ವಿಶೇಷ. ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಸ್ಟೇಟಸ್ ನಲ್ಲಿ ಇದರ ಬಗ್ಗೆ ನಟಿ ತಿಳಿಸಿದ್ದಾರೆ. ‘ಬೇರೆಯವರಿಗೆ ಅಕ್ಟೋಬರ್ ತಿಂಗಳು ರಜಾ ತಿಂಗಳು, ಆದರೆ ನಮಗೆ ಅಕ್ಟೋಬರ್ ತಿಂಗಳು ಎಂದರೆ ಹುಟ್ಟುಹಬ್ಬ ಆಚರಿಸುವ ತಿಂಗಳು’ ಅಂತಾ ಮೇಘನಾ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.

Meghana.jpg

ಚಿರು ಸರ್ಜಾ(Chiranjeevi Sarja) ಅಕಾಲಿಕ ಮರಣದ ಬಳಿಕ ಅವರ ಲಕ್ಷಾಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರಿದ್ದಾಗ ಅಭಿಮಾನಿಗಳ ಜೊತೆ ಪ್ರತಿವರ್ಷ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಇದು ಚಿರು ಇಲ್ಲದೆ ಆಚರಿಸುತ್ತಿರುವ 2ನೇ ಹುಟ್ಟುಹಬ್ಬವಾಗಿದೆ. ಕುಟುಂಬಸ್ಥರೆಲ್ಲಾ ಸೇರಿ ಈ ವಿಶೇಷ ದಿನದಂದು ಚಿರು ಸಮಾಧಿ ಬಳಿ ತೆರಳಿ ವಿಶೇಷ ಪೂಜೆ ಸಲ್ಲಿಸುವ ಸಾಧ್ಯತೆ ಇದೆ. ಕುಟುಂಬಸ್ಥರಿಗೆ ಚಿರು ಇಲ್ಲದ ನೋವನ್ನು ಇದೀಗ ಅವರ ಪುತ್ರ ರಾಯನ್ ಹೋಗಲಾಡಿಸಿದ್ದಾನೆ. ರಾಯನ್ ಬಂದ ಬಳಿಕ ಸುಂದರ್ ರಾಜ್ ಮತ್ತು ಸರ್ಜಾ ಫ್ಯಾಮಿಲಿ ಖುಷಿಯಲ್ಲಿದೆ. ಚಿರು ಕಳೆದುಕೊಂಡಿರುವ ನೋವುನ್ನು ರಾಯನ್ ಮುಖ ನೋಡಿ ಕುಟುಂಬ ಸದಸ್ಯರು ಮರೆಯುತ್ತಿದ್ದಾರೆ.      

ಇದನ್ನೂ ಓದಿ: ಕಿರುತೆರೆ ನಟಿ Soujanya ಆತ್ಮಹತ್ಯಾ ಪ್ರಕರಣಕ್ಕೆ ಹೊಸ ತಿರುವು , ಈ ನಟನ ವಿರುದ್ದ ದೂರು ನೀಡಿದ ತಂದೆ

ಅ.22ರಂದು ರಾಯನ್‍ಗೆ ಮೊದಲ ವರ್ಷದ ಹುಟ್ಟುಹಬ್ಬ(Rayan Raj Sarja 1st Birthday). ಹೀಗಾಗಿ ಎರಡೂ ಕುಟುಂಬದ ಸದಸ್ಯರೆಲ್ಲಾ ಸೇರಿ ಅದ್ದೂರಿಯಾಗಿ ರಾಯನ್ ಹುಟ್ಟುಹಬ್ಬವನ್ನು ಆಚರಿಸುವ ಸಾಧ್ಯತೆ ಇದೆ. ಚಿರಂಜೀವಿ ಸರ್ಜಾ ಅಕಾಲಿಕ ನಿಧನದ ಸಂದರ್ಭದಲ್ಲಿ ಮೇಘನಾ ರಾಜ್ ಗರ್ಭಿಣಿಯಾಗಿದ್ದರು. ಸಣ್ಣ ವಯಸ್ಸಿನಲ್ಲಿಯೇ ಪತಿ ಕಳೆದಕೊಂಡ ಅವರಿಗೆ ತುಂಬಾ ನೋವು ಬಾಧಿಸಿತ್ತು. ಸ್ವಲ್ಪ ದಿನ ಅದರಿಂದ ಹೊರಬರಲು ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ ಮಗುವಿನ ಆಗಮನವು ಅವರಲ್ಲಿ ಹೊಸ ಚೈತನ್ಯವನ್ನು ನೀಡಿತ್ತು. ಎಲ್ಲ ನೋವುಗಳನ್ನು ದಾಟಿ ಮುಂದೆ ಬಂದ ಮೇಘನಾರ ಮೊಗದಲ್ಲಿ ಪುತ್ರ ರಾಯನ್ ಮಂದಹಾಸ ಮೂಡಿಸುವಂತೆ ಮಾಡಿದ್ದಾನೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News